SY : Amma, sometimes I feel that applying spiritual guidances in certain situations or with certain people is not helping me. Also People think I’m the ignorant one.
AMMA : The Spiritual guidances which you are receiving is to apply on yourself, not on the situations or on the people. I’m giving you the bowl of sandalwood paste to carry along with you. You don’t have to do anything but just carrying it itself will spread the fragrance around.
Spiritual awareness is knowing that you are not bringing the changes in others, but to work on yourself by applying the guidance of Guru. This effort of yours will bring the changes in the situations around you and the changes in the way you look at the things around you.
You tell me one thing, if a pig is playing happily in the mud, you know that it is created to be like that and if you think that pig is the ignorant one to be playing in mud and you think of applying Sandalwood paste on it then who is the ignorant one here???
Never be Judgemental of anyone or anything. Concentrate on your journey. If you are happy within, then you will have the power to manifest that happiness around you. Spread the fragrance of love by being the love. The aura you carry will keep the unnecessary things away from you.
You take one step forward by carrying the guidance of Guru with faith and I shall take care of the rest.
ಸನಾತನ ಯಾತ್ರಿ : ಅಮ್ಮಾ! ಕೆಲವು ಸಂದರ್ಭಗಳಲ್ಲಿ ಅಥವಾ ಕೆಲವು ಜನರೊಂದಿಗೆ ಆಧ್ಯಾತ್ಮಿಕ ಮಾರ್ಗದರ್ಶನಗಳನ್ನು ಅನುಸರಿಸುವುದು ನನಗೆ ಸಹಾಯ ಮಾಡುತ್ತಿಲ್ಲ ಎಂದು ಕೆಲವೊಮ್ಮೆ ನನಗೆ ಭಾಸವಾಗುತ್ತದೆ. ನಾನು ಅಜ್ಞಾನಿ ಎಂದು ಜನರು ಭಾವಿಸುತ್ತಾರೆ.
ಅಮ್ಮ: ನೀವು ಸ್ವೀಕರಿಸುತ್ತಿರುವ ಆಧ್ಯಾತ್ಮಿಕ ಮಾರ್ಗದರ್ಶನಗಳು ನೀವು ನಿಮ್ಮಲ್ಲಿ ಅಳವಡಿಸಿ ಕೊಳ್ಳಲು , ಸಂದರ್ಭ ಅಥವಾ ಜನರು ಅನುಸರಿಸುವ ಸಲುವಾಗಿ ಅಲ್ಲ.
ನಾನು ನಿಮಗೆ ಜ್ಞಾನ ಎಂಬ ಶ್ರೀಗಂಧದಿಂದ ತುಂಬಿರುವ ಬಟ್ಟಲನ್ನು ನೀಡುತ್ತಿದ್ದೇನೆ. ನೀವು ಕೇವಲ ಅದನ್ನು ನಿಮ್ಮೊಂದಿಗೆ ಹೊತ್ತುಕೊಂಡು ಹೋಗುವುದರಿಂದ ಅದು ಸುತ್ತಲೂ ಸುಗಂಧವನ್ನು ಹರಡುತ್ತದೆ.
ಆಧ್ಯಾತ್ಮಿಕ ಅರಿವುಯೆಂದರೆ ನೀವು ಇತರರಲ್ಲಿ ಬದಲಾವಣೆಗಳನ್ನು ತರುವುದು ಅಲ್ಲ , ಗುರುಗಳ ಮಾರ್ಗದರ್ಶನವನ್ನು ನೀವು ಅನುಸರಿಸಬೇಕು, ಮತ್ತು ನಿಮ್ಮ ಈ ಪ್ರಯತ್ನವು ನಿಮ್ಮ ಸುತ್ತಲಿನ ಪರಿಸ್ಥಿತಿಗಳಲ್ಲಿ ಮತ್ತು ಸುತ್ತಮುತ್ತಲಿನ ವಿಷಯಗಳನ್ನು ನೀವು ನೋಡುವ ರೀತಿಯಲ್ಲಿ ಬದಲಾವಣೆಗಳನ್ನು ತರುತ್ತದೆ.
ನೀನು ಒಂದು ಮಾತು ಹೇಳು, ಹಂದಿಯು ಕೆಸರಿನಲ್ಲಿ ಸಂತೋಷದಿಂದ ಆಡುತ್ತಿದೆ ಎಂದರೆ, ಅದು ಹಾಗೆ ಇರಲು ಸೃಷ್ಟಿಸಲ್ಪಟ್ಟಿದೆ ಎಂದು ನಿಮಗೆ ತಿಳಿದಿದೆ, ಆದರೆ ಹಂದಿಯು ಕೆಸರಿನಲ್ಲಿ ಆಡುವುದು ಅಜ್ಞಾನ ಎಂದು ನೀವು ಭಾವಿಸಿದರೆ ಮತ್ತು ಅದಕ್ಕೆ ಶ್ರೀಗಂಧದ ಲೇಪನವನ್ನು ಲೇಪಿಸಲು ನೀವು ಯೋಚಿಸಿದರೆ ಇಲ್ಲಿ ಅಜ್ಞಾನಿ ಯಾರು???
ಯಾರನ್ನೂ ಅಥವಾ ಯಾವುದನ್ನೂ ಎಂದಿಗೂ ವಿಮರ್ಶೆ ಮಾಡದಿರಿ. ನಿಮ್ಮ ಅಂತರಂಗದ ಪ್ರಯಾಣದ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ.
ನೀವು ಒಳಗೆ ಸಂತೋಷವಾಗಿದ್ದರೆ, ನಿಮ್ಮ ಸುತ್ತಲು ಆ ಸಂತೋಷದ ವಾತಾವರಣವನ್ನು ಸೃಷ್ಟಿಸುವ ಶಕ್ತಿ ನಿಮ್ಮಲ್ಲಿ ಮೂಡುತ್ತದೆ. ಪ್ರೀತಿಯಿಂದಲೇ ಪ್ರೀತಿಯ ಪರಿಮಳವನ್ನು ಹರಡಿ. ನಿಮ್ಮ ಸುತ್ತಲೂ ಮೂಡುವ ದೈವೀ ಶಕ್ತಿಯ ಆವರಣವು ನಿಮ್ಮಿಂದ ಅನಗತ್ಯವಾದುದನ್ನು ದೂರವಿಡುತ್ತದೆ. ಗುರುವಿನ ಮಾರ್ಗದರ್ಶನವನ್ನು ಧೃಢನಂಬಿಕೆಯಿಂದ ಹಿಡಿದುಕೊಂಡು ನೀವು ಒಂದು ಹೆಜ್ಜೆ ಮುಂದಿಡಿ! ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ!