SY: Amma, now I understand why it is said that the spiritual path is for the courageous ones. The churning that is happening within is very painful, Mother. I’m drifting away; don’t leave me, my mother.
AMMA: I have never left you, my child. I’m always in you and around you. Have faith.
This is Kaliyuga, and in this yuga, taking the name of the divine itself is a reminder to you that you are the courageous one who has chosen the right path.
As you walk closer to the sathvik urja within, the pull of the thamasik urja will also become active. You should be happy when you are facing challenges in your inner journey, as you are the chosen one. The universe is making you capable of carrying the responsibility of bringing balance to the world by making you capable of being balanced within. Never give up. I’m always with you.
Clashes happening with your own thoughts are clashes between the energies within. It is the war between the divine and the demon within. Whenever unnecessary thoughts try to pull you down, keep reminding yourself that they are the weapons of negative energies and you are capable of handling them.
“Your tears are my taste” is the voice of both the divine and the demons within. Your tears of faith are the taste of the divine, and your tears of fear are the taste of the demon.
Why fear when Mother is here
ಸನಾತನ ಯಾತ್ರಿ: ಅಮ್ಮಾ, ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ಸ್ಥೈರ್ಯವಂತ ರಾಗಿರಬೇಕೆಂದು ಏಕೆ ಹೇಳಲಾಗಿದೆ ಎಂದು ನನಗೆ ಈಗ ಅರ್ಥವಾಗಿದೆ. ಅಂತರಾಳದಲ್ಲಿ ನಡೆಯುವ ಮಂಥನ ವೇದನೆಯಿಂದ ಕೂಡಿದೆ ತಾಯಿ,ನಾನು ಎಲ್ಲೋ ಎಡವುತ್ತಿದ್ದೇನೆ , ನನ್ನನ್ನು ಬಿಡಬೇಡ ನನ್ನ ತಾಯಿ.
ಅಮ್ಮ: ನಾನು ನಿನ್ನನ್ನು ಬಿಟ್ಟು ಎಲ್ಲೂ ಹೋಗಿಲ್ಲ ನನ್ನ ಮಗು, ನಾನು ಯಾವಾಗಲೂ ನಿನ್ನಲ್ಲಿ ಮತ್ತು ನಿನ್ನ ಸುತ್ತಲೂ ಇದ್ದೇನೆ, ನಂಬಿಕೆಯಿಡು.
ಇದು ಕಲಿಯುಗ ಮತ್ತು ಈ ಯುಗದಲ್ಲಿ ನೀವು ದೈವೀ ನಾಮಸ್ಮರಣನೆ ಮಾಡುತ್ತಿರುವುದೇ ನೀವೆಷ್ಟು ಸ್ಥೈರ್ಯವಂತರು ಎಂದು ನಿಮಗೆ ನೀವೇ ನೆನಪಿಸಿಕೊಳ್ಳಬೇಕು ಹಾಗು ನೀನು ಸರಿಯಾಗದ ಮಾರ್ಗದಲ್ಲೇ ನಡೆಯುತ್ತಿರುವೆ .
ಒಳಗಿರುವ ಸಾತ್ವಿಕ ಶಕ್ತಿಗೆ ಹತ್ತಿರವಾದಂತೆ ತಾಮಸಿಕ ಶಕ್ತಿ ಸೆಳೆತವೂ ಕ್ರಿಯಾಶೀಲವಾಗುತ್ತದೆ. ನಿಮ್ಮ ಆಂತರಿಕ ಪ್ರಯಾಣದಲ್ಲಿನ ಅಡೆತಡೆಗಳನ್ನು ಎದುರಿಸುವ ಅವಕಾಶ ದೊರೆತದ್ದಕ್ಕೆ ನೀವು ಸಂತೋಷ ಪಡಬೇಕು, ಏಕೆಂದರೆ ನಿಮ್ಮಲ್ಲಿ ಅದನ್ನು ಎದುರಿಸುವ ಸಾಮರ್ಥ್ಯವಿದೆ. ವಿಶ್ವವು ನಿಮ್ಮ ಅಂತರಂಗದಲ್ಲಿ ಸಮತೋಲನ ತರುವ ಮೂಲಕ, ಸೃಷ್ಟಿಯಲ್ಲಿನ ಸಮತೋಲನ ತರುವ ಜವಾಬ್ದಾರಿಯನ್ನು ಹೊರಲು ನಿಮ್ಮನ್ನು ಸಮರ್ಥರನ್ನಾಗಿಸುತ್ತಿದೆ, ಎಂದಿಗೂ ನಿರಾಶೆಯಿಂದ ಬಿಟ್ಟುಕೊಡಬೇಡಿ. ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ.
ನಿಮ್ಮ ಒಳಗೆ ಆಲೋಚನೆಗಳೊಂದಿಗೆ ಆಗುವ ಘರ್ಷಣೆಗಳು ಒಳಗಿನ ಶಕ್ತಿಗಳ(ಸಾತ್ವಿಕ & ತಾಮಸಿಕ) ನಡುವಿನ ಘರ್ಷಣೆಗಳಾಗಿವೆ. ಇದು ದೈವಿಕ ಮತ್ತು ರಾಕ್ಷಸನ ನಡುವಿನ ಯುದ್ಧವಾಗಿದೆ. ಅನಾವಶ್ಯಕ ಆಲೋಚನೆಗಳು ನಿಮ್ಮನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸಿದಾಗ, ಅವುಗಳು ನಕಾರಾತ್ಮಕ ಶಕ್ತಿಗಳ ಅಸ್ತ್ರಗಳು ಮತ್ತು ಅವುಗಳನ್ನು ನಿಭಾಯಿಸಲು ನೀವು ಸಮರ್ಥರು ಎಂದು ನಿಮ್ಮನ್ನು ನೆನಪಿಸಿಕೊಳ್ಳಿ.
ನಿಮ್ಮ ನಂಬಿಕೆಯ ಕಣ್ಣೀರು ದೈವಕ್ಕೆ ರುಚಿಯಾದರೆ ನಿಮ್ಮ ಭಯದ ಕಣ್ಣೀರು ರಾಕ್ಷಸನ ರುಚಿಯಾಗಿದೆ.
ಅಮ್ಮ ಇಲ್ಲಿರುವಾಗ ಭಯ ಏಕೆ??