01-11-2024
Recently few of us were sitting at Amma’s feet. Amma was sitting on sofa cross legged keeping her right leg on the left leg. Amma’s eyes were closed and there was pin drop silence for long. After sometime Amma opened her eyes and looked at me and at that moment I asked Amma to give me the darshan of her paripurna form. I had not even completed the sentence and I felt Amma kicked me very hard on my chest and my body was pushed back few meters away with a jerk.
But then I realised that I was sitting in the same place and not knowing how to react, I asked Amma how can Devi do like this ? How can Amma Kick me so hard. I was expressing so many things which was not in my control.
Amma started laughing out loud looking ay my facial expression. And brother Gopinath who was sitting next to me also started laughing and told me that he saw Amma’s feet very gently touching my shirt. But the energy was so high that I felt my body was pushed back with high force.
Later Amma asked me “what kind of darshan you want? Is it the darshan of the form you have limited me into?……. As Just now you asked me “How can Devi do like this ?” … ” I can do everything that you can think of and all that you cannot think of and beyond.”
Then Amma told me something which I cannot reveal without her permission.
I surrender at your feet Amma
Arun
ಇತ್ತೀಚೆಗೆ ನಾವು ಕೆಲವರು ಅಮ್ಮನ ಹತ್ತಿರ ಕುಳಿತಿದ್ದೆವು .ಅಮ್ಮ ಸೋಫಾ ದಲ್ಲಿ ಕೂಳಿತಿದ್ದರು ಅಮ್ಮ ತಮ್ಮ ಬಲ ಕಾಲನ್ನು ಎಡ ಕಾಲಿನ ಮೇಲೆ ಹಾಕಿ ಕುಳಿತಿದ್ದರು. ಅಮ್ಮ ಕಣ್ಣು ಮುಚ್ಚಿ ಧ್ಯಾನದಲ್ಲಿ ಕುಳಿತಿದ್ದರು . ತುಂಬಾ ಸಮಯ ನಿಶಬ್ದವಾಗಿತ್ತು. ಅಮ್ಮ ಕಣ್ತೆರೆದು ನನ್ನನ್ನು ನೋಡಿದರು ಆ ಕ್ಷಣದಲ್ಲಿ ನಾನು ಅಮ್ಮನನ್ನು ಪರಿಪೂರ್ಣ ದರ್ಶನ ಕೊಡಿ ಎಂದು ಬೇಡಿಕೊಳ್ಳುವಷ್ಟರಲ್ಲಿ ಅಮ್ಮ ಕಾಲಿನಿಂದ ನನ್ನ ಎದೆಗೆ ಹೊಡೆದು ಕೆಲವು ಗಜಗಳು ನಾನು ಹಿಂದೆ ಹೋದಹಾಗೆ ಭಾಸವಾಯಿತು, ಆದರೇ ನಾನು ಕುಳಿತ ಜಾಗದಲ್ಲೇ ಕುಳಿತಿದ್ದೆ ಏನು ಮಾಡಬೇಕೆಂದು ತಿಳಿಯದೇ ಅಮ್ಮ ಹೇಗೆ ಈ ರೀತಿ ಮಾಡಬಹುದು ಎಂದು ನನ್ನೊಳಗೆ ಅಂದು ಕೊಂಡೆ ಅಮ್ಮ ಹೇಗೆ ಇಷ್ಟೊಂದು ಜೋರಾಗಿ ಒಡೆಯ ಬಹುದು. ನಾನು ನನಗೆ ತಿಳಿಯದೇನೆ ಏನೇನೋ ಹೇಳುತ್ತಿದ್ದೆ. ಅಮ್ಮ ನನ್ನ ಪರಿಸ್ಥಿತಿ ಯನ್ನು ನೋಡಿ ಜೋರಾಗಿ ನಗ ತೊಡಗಿದರು. ಪಕ್ಕದಲ್ಲೇ ಕುಳಿತಿದ್ದ ಗೋಪಿನಾಥ್ ಸಹೋದರರು ನಕ್ಕಿ ಹೇಳಿದರು ಅಮ್ಮ ತುಂಬಾ ಸಹಜವಾಗಿ ಕಾಲಿಂದ ನನ್ನ ಅಂಗಿಯನ್ನು ತಗಳಿಸಿದರೆಂದು ಆದರೆ ಆ ಶಕ್ತಿ ಎಷ್ಟಿತ್ತೆಂದರೆ ನನ್ನನು ಜೋರಾಗಿ ಹಿಂದಕ್ಕೆ ತಳ್ಳಿದಂತಿತ್ತು.
ನಂತರ ಅಮ್ಮ ಕೇಳಿದರು “ನಿನಗೆ ಯಾವ ದರ್ಶನ ಬೇಕು, ನಿನ್ನ ಊಹೆಗೆ ಸೀಮಿತವಾಗಿರೋ ಅವತಾರವೇ ಈಗತಾನೇ ಅಮ್ಮ ಹೇಗೆ ನನ್ನನು ಹೋಡಯಬಹುದೆಂದು ಪ್ರಶ್ನಿಸಿದ್ದಿಯೆಲ್ಲ. ನಾನು ಎಲ್ಲವನ್ನೂ ಮಾಡಬಲ್ಲೆ ನಿನ್ನ ಊಹೆಗೂ ಮತ್ತು ನಿನ್ನ ಊಹೇಗೂ ಮೀರಿ “.
ನಂತರ ಅಮ್ಮ ಹೇಳಿದ್ದನ್ನು ಅಮ್ಮನ ಅನುಮತಿ ಇಲ್ಲದೆ ನಾನು ಹೇಳುವ ಹಾಗೆ ಇಲ್ಲ.
ಅಮ್ಮನ ಪಾದಗಳಲ್ಲಿ ಶರಣು
ಅರುಣ್