Connecting To The Divine Within - Jagruta Shakti


21-06-2026

Pranams to all,

I wanted to share what I learnt today with the divine mother’s guidance🙏

I have come to Shaktidham and carpenters are doing the yagnashala roofing work. Today they were fixing the framework for the first level of the structure. Entire structure is made with interlock system and the carpenters were saying that it is the first time such massive structure is coming where roof hight alone will be 38 feet. While they were fixing the last log of the octogonal structure corner, it was taking time to align with the vertical supporting pillar as they had to lift the heavy pillar manually.
Few of us were watching their skilled work but seeing their effort to align which was taking longer time than the usual, something within me pushed me to go to Amma and inform about this matter and bring Amma to Yagnashala.
As I informed about this to Amma, Amma with her playful voice told me “why should I come? Tell HOD, he will guide”. I got confused and even before I could clarify it Amma got up and started walking towards the Yagnashala. Looking at the roof Amma turned to us and told close your eyes and tell HOD, VISHVAKARMA ( Divine architect of Universe and the patron deity of craftsmen). We all closed our eyes and within a few seconds Arun brother heard a voice guiding him to go and get the jack from his car. As he got the jack the carpenters lifted the entire wooden pillar and the connecting log easily got fixed into its place. (They were trying for more than an hour to fix it).
Amma told see, this is how easy it is to connect to the divine within and seek the guidance🙏🙏🙏

Later the carpenters got down and bowed down to Amma with reverence and they also offered their gratitude to lord Vishvakarma🙏🙏

ಎಲ್ಲರಿಗೂ ಪ್ರಣಾಮಗಳು 🙏

ಇಂದು ಅಮ್ಮನ ಮಾರ್ಗದರ್ಶನದಿಂದ ನಾನು ಕಲಿತ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. 🙏

ನಾನು ಶಕ್ತಿಧಾಮಕ್ಕೆ ಬಂದಿದ್ದೆ. ಅಲ್ಲಿ ಯಜ್ಞಶಾಲೆಯ ಮೇಲ್ಛಾವಣಿಯ ಕೆಲಸ ನಡೆಯುತ್ತಿತ್ತು. ಇಂದು ಅವರು ಕಟ್ಟಡದ ಮೊದಲ ಹಂತದ ಚೌಕಟ್ಟನ್ನು ಅಳವಡಿಸುತ್ತಿದ್ದರು. ಸಂಪೂರ್ಣ ರಚನೆಯು ಇಂಟರ್‌ಲಾಕ್ ವ್ಯವಸ್ಥೆಯಿಂದ ನಿರ್ಮಾಣವಾಗುತ್ತಿದೆ. ಈ ರೀತಿಯ ಬೃಹತ್ ರಚನೆಯನ್ನು ಮೊದಲ ಬಾರಿಗೆ ನಿರ್ಮಿಸುತ್ತಿದ್ದೇವೆ, ಅದರಲ್ಲೂ ಮೇಲ್ಛಾವಣಿಯ ಎತ್ತರವೇ 38 ಅಡಿ ಇದೆ ಎಂದು ಬಡಗಿಗಳು ಹೇಳುತ್ತಿದ್ದರು.
ಅಷ್ಟಭುಜಾಕಾರದ ರಚನೆಯ ಒಂದು ಮೂಲೆಯ ಕೊನೆಯ ಮರದ ದಿಮ್ಮಿಯನ್ನು ಅಳವಡಿಸುವಾಗ ಅದನ್ನು ಉದ್ದವಾದ ಆಧಾರ ಸ್ತಂಭದೊಂದಿಗೆ ಸರಿಯಾಗಿ ಜೋಡಿಸಲು ಅವರಿಗೆ ಕಷ್ಟವಾಗುತ್ತಿತ್ತು. ಭಾರವಾದ ಸ್ತಂಭವನ್ನು ಕೈಯಿಂದಲೇ ಎತ್ತಬೇಕಾಗಿದ್ದ ಕಾರಣ ಕೆಲಸವು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.
ನಮ್ಮಲ್ಲಿ ಕೆಲವರು ಅವರ ಕುಶಲತೆಯ ಕೆಲಸವನ್ನು ನೋಡುತ್ತಾ ನಿಂತಿದ್ದೆವು. ಅವರು ಬಹಳ ಪ್ರಯತ್ನಿಸುತ್ತಿದ್ದರೂ ಕೆಲಸ ಪೂರ್ಣಗೊಳ್ಳದಿರುವುದನ್ನು ನೋಡಿದಾಗ, ನನ್ನೊಳಗಿನಿಂದ ಏನೋ ಒಂದು ಪ್ರೇರಣೆ ಬಂದು ಈ ವಿಷಯವನ್ನು ಅಮ್ಮನಿಗೆ ತಿಳಿಸಿ ಅವರನ್ನು ಯಜ್ಞಶಾಲೆಗೆ ಕರೆತರಬೇಕೆಂದು ಅನಿಸಿತು.
ನಾನು ಅಮ್ಮನಿಗೆ ವಿಷಯವನ್ನು ತಿಳಿಸಿದಾಗ, ಅಮ್ಮ ತಮ್ಮ ಸಹಜವಾದ ತಮಾಷೆಯ ಧ್ವನಿಯಲ್ಲಿ, “ನಾನು ಯಾಕೆ ಬರಬೇಕು? HOD ಗೆ ಹೇಳು, ಅವರು ಮಾರ್ಗದರ್ಶನ ಮಾಡುತ್ತಾರೆ” ಎಂದು ಹೇಳಿದರು. ನನಗೆ ಗೊಂದಲವಾಯಿತು. ನಾನು ಸ್ಪಷ್ಟೀಕರಣ ಕೇಳುವ ಮುನ್ನವೇ ಅಮ್ಮ ಎದ್ದು ಯಜ್ಞಶಾಲೆಯ ಕಡೆಗೆ ನಡೆಯಲು ಆರಂಭಿಸಿದರು.
ಮೇಲ್ಛಾವಣಿಯ ರಚನೆಯನ್ನು ನೋಡಿದ ಅಮ್ಮ, “ಕಣ್ಣುಗಳನ್ನು ಮುಚ್ಚಿ HOD ಆದ ವಿಶ್ವಕರ್ಮನನ್ನು ಕೇಳಿ” ಎಂದು ಹೇಳಿದರು. ವಿಶ್ವಕರ್ಮನು ಸೃಷ್ಟಿಯ ದಿವ್ಯ ವಾಸ್ತುಶಿಲ್ಪಿ ಹಾಗೂ ಶಿಲ್ಪಿಗಳ ಅಧಿದೇವತೆ.
ನಾವೆಲ್ಲರೂ ಕಣ್ಣು ಮುಚ್ಚಿದೆವು. ಕೆಲವೇ ಕ್ಷಣಗಳಲ್ಲಿ ಅರುಣ್ ಸಹೋದರ ತನ್ನ ಕಾರಿನಿಂದ ಜ್ಯಾಕ್ ನ್ನು ತರಬೇಕೆಂಬ ಒಳಗಿನಿಂದ/ಆಂತರಿಕ ಮಾರ್ಗದರ್ಶನ ದೊರೆಯಿತು. ಅವರು ತಕ್ಷಣ ಜ್ಯಾಕ್ ತಂದುಕೊಟ್ಟರು. ಅದರ ಸಹಾಯದಿಂದ ಬಡಗಿಗಳು ಭಾರವಾದ ಮರದ ಸ್ತಂಭವನ್ನು ಎತ್ತಲು ಸಾಧ್ಯವಾಯಿತು ಮತ್ತು ಜೋಡಿಸಬೇಕಿದ್ದ ಮರದ ದಿಮ್ಮಿ ಬಹಳ ಸುಲಭವಾಗಿ ತನ್ನ ಸ್ಥಾನದಲ್ಲಿ ಅಳವಡಿಸಲ್ಪಟ್ಟಿತು. ಒಂದು ಗಂಟೆಗೂ ಹೆಚ್ಚು ಸಮಯದಿಂದ ಅವರು ಪ್ರಯತ್ನಿಸುತ್ತಿದ್ದ ಕೆಲಸ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಂಡಿತು.
ಅದನ್ನು ನೋಡಿ ಅಮ್ಮ, “ನೋಡಿ, ದೈವಿಕ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿ ಮಾರ್ಗದರ್ಶನ ಪಡೆಯುವುದು ಎಷ್ಟು ಸುಲಭ” ಎಂದು ಹೇಳಿದರು. 🙏🙏🙏
ನಂತರ ಬಡಗಿಗಳು ಕೆಳಗೆ ಬಂದು ಅಮ್ಮನಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು ಹಾಗೂ ಭಗವಾನ್ ವಿಶ್ವಕರ್ಮನಿಗೂ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು. 🙏🙏🙏

ಅಮ್ಮ ಒಂದೇ ಕ್ಷಣದಲ್ಲಿ ಎಲ್ಲವನ್ನೂ ಸರಿ ಮಾಡಬಹುದಾಗಿತ್ತು. ಆದರೆ ನಮ್ಮೊಳಗಿನ ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಿ, ಅದರ ಮಾರ್ಗದರ್ಶನವನ್ನು ಪಡೆದು, ಅದನ್ನು ನೇರವಾಗಿ ಅನುಭವಿಸುವುದನ್ನು ಕಲಿಸುವುದೇ ಅವರ ದಿವ್ಯ ಮಾರ್ಗವಾಗಿದೆ. 🙏🙏🙏

ಜೈ ಮಾಁ ಶಕ್ತಿ 🙏🌺🔱

-Triveni B

Post navigation

Leave a Reply

Your email address will not be published. Required fields are marked *