04-11-2024

SY : Amma, what happens when one experiences his Sahasrara Chakra opens in his Kundalini practice.

Amma : The one who has experienced it has never given any explanation to it. A Guru while making you understand the reality, he will not talk directly on the truth as it has no words but he will narrate stories or give certain examples which will give you the closest understanding of it.
That is why certain things are beyond words and only the silence within will guide you to experience it.
Guru can only guide you in your journey and it is you who will experience it beyond any explanation.

So let me give you an example;

If you have ever experienced the Virtual Reality 3D glasses, where you will wear a device which makes you believe that you are part of whatever you are seeing through that device. You will express many emotions like joyfulness, excitement , scared, fearful etc. But once the show is over and when you remove that device you will come to the reality that all these while you were just a witness and never a part of it. And you just forgot that you were wearing a device. As soon you remove that glasses it doesn’t take a second for you to come back to reality and understand that you were just a witness.

This is exactly the moment when Sahasrara Chakra Opens. You are coming back to your absolute reality. The curtain of Maya is like the VR device, which makes you believe that you are the part of all that is happening right now and once the curtain is removed you come back to the reality that you are a witness. And everything exists as long as you allow yourself into THAT.

ಸನಾತನ ಯಾತ್ರಿ : ಅಮ್ಮ ಕುಂಡಲಿನಿ ಯೋಗ ಅಭ್ಯಾಸ ಮಾಡುವಾಗ ಸಹಸ್ರಾರ ಚಕ್ರ ತೆರದಾಗ ಆಗುವ ಅನುಭವದಿಂದ ನಮಗೆ ಏನಾಗುತ್ತದೆ?

ಅಮ್ಮ: ಯಾರಿಗೆ ಆ ಅನುಭವ ಆಗಿದೆಯೋ ಅದನ್ನು ಅವರು ಎಂದು ವಿವರಿಸಿಲ್ಲ. ಒಬ್ಬ ಗುರುಗಳು ನಿಮಗೆ ವಾಸ್ತವ ಅರ್ಥ ಮಾಡಿಸಲು ನೇರವಾಗಿ ಸತ್ಯವನ್ನು ಹೇಳುವುದಿಲ್ಲ, ಏಕೆಂದರೆ ಅದನ್ನು ಶಬ್ದಗಳಿಂದ ಹೇಳಲು ಸಾಧ್ಯವಿಲ್ಲ ಅದರ ಬದಲಿಗೆ ಅವರು ಕೆಲವು ಉದಾರಣೆಗಳನ್ನು ಕೊಟ್ಟು ಕಥೆಗಳ ಮೂಲಕ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಾರೆ.
ಕೆಲವು ಅನುಭವಗಳು ಶಬ್ದಗಳನ್ನು ಮೀರಿದ್ದು ಆದ್ದರಿಂದ ಅದನ್ನು ನಿಮ್ಮೊಳಗಿನ ಅಂತರಂಗದ ಮೌನದಲ್ಲಿ ಲೀನವಾದಾಗ ತಾನಾಗೆ ಅನುಭವಿಸಲು ದಾರಿ ತೋರಿಸುತ್ತದೆ.
ಗುರುವು ಕೇವಲ ಮಾರ್ಗದರ್ಶನ ನೀಡಬಹುದು ಆದರೆ ಅದರ ಮುಂದಿನ ಪಯಣ ನಿಮಗೆ ವಿವರಣೆ ಮೀರಿದ ಅನುಭವ ಕೊಡುತ್ತದೆ.

ನಿಮಗೆ ಒಂದು ಉದಾಹರಣೆ ಕೊಡುತ್ತೇನೆ.

ನಿಮಗೇನಾದರೂ 3D ಕನ್ನಡಕದ ಅನುಭವವಿದ್ದರೆ, ಆ ಕನ್ನಡಕ ಧರಿಸಿ ಚಿತ್ರದ ದೃಶ್ಯಗಳನ್ನು ನೋಡಿದಾಗ ನೀವು ಆ ಸನ್ನಿವೇಶದಲ್ಲಿ ಒಬ್ಬರಾಗಿರುವ ಭಾವನೆ ಮೂಡಿಸುತ್ತದೆ. ನೀವು ಅದರೊಂದಿಗೆ ಉತ್ಸಾಹ, ಸಂತಸ, ಭಯ, ಹೆದರಿಕೆ ಮುಂತಾದ ಭಾವನೆಗಳನ್ನು ಅನುಭವಿಸುವಿರಿ. ಆದರೆ ಚಿತ್ರ ಮುಗಿದ ನಂತರ ಕನ್ನಡಕವನ್ನು ತೆಗದ ತಕ್ಷಣ ನೀವು ವಾಸ್ತವಕ್ಕೆ ಬರುವಿರಿ ಈಗ ನೆಡದ ಸನ್ನಿವೇಶಗಳಲ್ಲಿ ನೀವು ಅದರ ಭಾಗವಾಗಿರದೆ ಕೇವಲ ಸಾಕ್ಷಿಯಾಗಿ ನೋಡುತ್ತಿದ್ದರೆಂದು ಅರಿವಾಗುತ್ತದೆ. ನೀವು ಆ ಕ್ಷಣಕ್ಕೆ ಕನ್ನಡಕ ಧರಿಸಿರುವುದನ್ನು ಮರೆತ್ತಿರುತೀರಿ . ಕನ್ನಡಕವನ್ನು ತೆಗದು ವಾಸ್ತವ ಸ್ಥಿತಿಗೆ ಬಂದ ಮೇಲೆ ನೀವು ಬರೀ ಸಾಕ್ಷಿಯಾಗಿದ್ದ ಅನುಭವ ತಿಳಿಯುತ್ತದೆ.

ಅದರಂತೆ ಸಹಸ್ರಾರ ಚಕ್ರ ತೆರೆದ ಆ ಕ್ಷಣ ನೀವು ನಿಮ್ಮ ನೈಜ ಸ್ಥಿತಿಗೆ ಬರುವಿರಿ. ಮಾಯೆ 3D ಕನ್ನಡಕದ ಹಾಗೆ, ಆ ಸಮಯದಲ್ಲಿ ನಿಮ್ಮ ಸುತ್ತ ನೆಡೆಯುವ ಸನ್ನಿವೇಶದಲ್ಲಿ ಭಾಗವೆಂಬ ಭಾವನೆ ಮೂಡಿಸುತ್ತದೆ ಆದರೆ ಪರದೆ ತೆಗದರೆ ನೀವು ನಿಜ ಸ್ಥಿತಿಗೆ ಬಂದು ನೀವು ಬರೇ ವೀಕ್ಷಕರು ಎಂದು ತಿಳಿಯುತ್ತದೆ.
ನಿಮ್ಮನ್ನು ನೀವು ಎಷ್ಟು ತೊಡಗಿಸಿ ಕೊಳ್ಳುವಿರೋ ಅಷ್ಟು ಅಸ್ತಿತ್ವದಲ್ಲಿ ಇರುತ್ತದೆ.

Post navigation

Leave a Reply

Your email address will not be published. Required fields are marked *