Divya Vani


21-7-25

Pranams to all 🙏

In the month of May, Amma had finalised a compound design for Jagruta Shakti Dham. Brother Kishore voluntarily took the responsibility of looking after the construction work on behalf of Jagruta Shakti Trust. A known person to Kishore Mr. Renu Kumar from Somwarpet ( a place in Coorg) took the contract to do the compound work. Renu Kumar visited the site and was paid advance amount to start the work. He unloaded required materials at Shaktidham site but he couldn’t commence the work as monsoon season started and it is raining continuously for the past two months in this region.

3 days back he called brother Kishore and expressed his willingness to meet in person as he wanted to share an important thing with regards to work at ShaktiDham. He insisted to meet brother Kishore in person instead of talking over the call.
After meeting Brother Kishore he was in a great delight and was still awestruck with the divine encounter he was blessed with previous night. which he never ever experienced in his life. He clearly heard a divine feminine voice waking him up and saying “Start the work at Shakti Dham immediately, Kishore will guide you. And tell Kishore, his true place is not where he currently resides, but amidst the sacred grounds of Shakti Dham”.

It was not a dream or vision but a never heard before divine voice whispering in his ears with love and compassion. He says it was Amma who was there to remind him his responsibility.

He is praying to Amma to give him Darshan as he has not met Amma in person till date and says that he will start the work at ShaktiDham immediately and he has complete faith that even the Rain God will help him to complete the work on time

Arun

ಎಲ್ಲರಿಗೂ ಪ್ರಣಾಮಗಳು,
ಅಮ್ಮ ಮೇ ತಿಂಗಳಲ್ಲಿ ಜಾಗೃತ ಶಕ್ತಿಧಾಮದ ಕಾಂಪೌಂಡ್ ಗೋಡೆಯ ವಿನ್ಯಾಸದ ವಿಷಯವಾಗಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಾಗಿತ್ತು. ಕಿಶೋರ್ ಅವರು ಜಾಗೃತ ತ್ರಷ್ಟಿನ ಪರವಾಗಿ, ಸ್ವ ಇಚ್ಚೆಯಿಂದ ಕಾಂಪೌಂಡ್ ಕಟ್ಟುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕಿಶೋರ್ ರವರ ಪರಿಚಯ ವ್ಯಕ್ತಿ ಸೋಮವಾರಪೇಟೆಯ ( ಕೊಡಗಿನ ಒಂದು ಪ್ರದೇಶ ) ಶ್ರೀ ರೇಣು ಕುಮಾರ್ ಅವರು ಇದರ ಕಾಂಟ್ರಾಕ್ಟ್ ವಹಿಸಿಕೊಂಡಿದ್ದರು. ರೇಣು ಕುಮಾರ್ ‘ಶಕ್ತಿಧಾಮ’ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು ಮತ್ತು ಈ ಕೆಲಸ ಆರಂಭಿಸಲು ಬೇಕಾಗುವ (ಅಡ್ವಾನ್ಸ್) ಮುಂಗಡ ಹಣವನ್ನು ಅವರಿಗೆ ನೀಡಲಾಗಿತ್ತು.
ರೇಣುರವರು ಈ ಕೆಲಸಕ್ಕೆ ಬೇಕಾಗುವ ಎಲ್ಲ ಮೂಲ ಸಾಮಾಗ್ರಿಗಳನ್ನು ಶಕ್ತಿಧಾಮ ಪ್ರದೇಶದಲ್ಲಿ ಇಳಿಸಿದ್ದರು. ಆದರೆ ಶಕ್ತಿಧಾಮ್ ಹತ್ತಿರ ಎರಡು ತಿಂಗಳಗಳಿಂದ ನಿರಂತರವಾಗಿ ಮಳೆ ಬೀಳುತ್ತಿದ್ದರಿಂದ ಅವರಿಗೆ ಕೆಲಸ ಆರಂಭಿಸಲು ಸಾಧ್ಯವಾಗಲಿಲ್ಲ.
ಮೂರು ದಿನಗಳ ಹಿಂದೆ ರೇಣುರವರು ಕಿಶೋರ್ ಗೆ ರ್ಫೋನ್ ಮಾಡಿ ತಾನು ಶಕ್ತಿಧಾಮದ ಕಾಂಪೌಂಡ್ ಗೋಡೆ ಕಟ್ಟುವ ವಿಚಾರದಲ್ಲಿ ಒಂದು ಮುಖ್ಯವಾದ ವಿಷಯವನ್ನು ಫೋನಿನಲ್ಲಿ ಮಾತನಾಡುವ ಬದಲು ಕಿಶೋರ್ ಅವರನ್ನು ವೈಯಕ್ತಿಕವಾಗಿ ಮುಖಾಮುಖಿ ಭೇಟಿಯಾಗಿ ತಿಳಿಸಬೇಕು ಎನ್ನುವ ತಮ್ಮ ಕುತೂಹಲ ವ್ಯಕ್ತಪಡಿಸಿದರು.

ರೇಣುರವರು ಕಿಶೋರ್ ರವರನ್ನು ಭೇಟಿಯಾದ ನಂತರ ತುಂಬಾ ಖುಷಿಯಲ್ಲಿದ್ದರೂ ಮತ್ತು ಹಿಂದಿನ ರಾತ್ರಿಯ ದೈವಿಕ ದರ್ಶನದ ಅನುಭವದೊಂದಿಗೆ ಆಶ್ಚರ್ಯಭರಿತರಾಗಿಯೇ ಇದ್ದರು. ಇಂತಹ ಅನುಭವ ಅವರಿಗೆ ತಮ್ಮ ಜೀವನದಲ್ಲಿ ಎಂದೆಂದೂ ಆಗಿರಲಿಲ್ಲ. ಅವರು ಸ್ಪಷ್ಟವಾಗಿ ಒಂದು ದೈವಿಕ ದೇವಿ ಧ್ವನಿಯನ್ನು ಅವರನ್ನು ಎಚ್ಚರಿಸುತ್ತಿರುವುದನ್ನು ಮತ್ತು ಹೀಗೆ ನುಡಿದಿದ್ದನ್ನು ಹೇಳಿದರು.
“ಕೂಡಲೇ ಶಕ್ತಿಧಾಮದಲ್ಲಿ ಕಾಂಪೌಂಡ್ ಕೆಲಸವನ್ನು ಆರಂಭಿಸಿ.ಕಿಶೋರ್ ನಿಮಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಕಿಶೋರ್ ಗೆ ಈಗ ನೀವು ಹೇಳಬೇಕು” “ನಿಜವಾದ ಪ್ರದೇಶ ಈಗ ಅವರು ಸದ್ಯ ನೆಲೆಸಿರುವ ಪ್ರದೇಶವಲ್ಲ ಬದಲಾಗಿ ಅವರು ಇರಬೇಕಾಗಿರುವ ನಿಜವಾದ ಪ್ರದೇಶ ಶಕ್ತಿಧಾಮ್ ದ ಪವಿತ್ರ ಮಣ್ಣಿನ ನಡುವೆ” ಎಂದು.

ಇದು ಕನಸಲ್ಲ ಅಥವಾ ದಿವ್ಯದರ್ಶನವಲ್ಲ. ಆದರೆ ಈ ಹಿಂದೆ ಎಂದೂ ಕೇಳಿರದ ಪ್ರೀತಿ ಹಾಗೂ ಕರುಣಾಭರಿತ ದೈವಿಕ ಧ್ವನಿಯು ಕಿವಿಯಲ್ಲಿ ಕೇಳಾಪಟ್ಟಿತು. ಇದು ಅಮ್ಮನವರೆ ಸ್ವತಃ ನನ್ನ ಜವಾಬ್ದಾರಿಯನ್ನು ನನಗೆ ನೆನಪಿಸಿದ್ದು ಎಂದು ರೇಣು ಅವರು ಹೇಳುತ್ತಾರೆ.
ರೇಣುರವರೂ ಅಮ್ಮವರನ್ನು ತನಗೆ ದಿವ್ಯದರ್ಶನ ನೀಡಿಸಬೇಕಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ. ಏಕೆಂದರೆ ರೇಣುರವರು ಈತನಕ ಅಮ್ಮನವರನ್ನು ವೈಯಕ್ತಿಕವಾಗಿ ದರ್ಶನ ಮಾಡಿಲ್ಲ ಮತ್ತು ತಾನು ಈ ಕಾಂಪೌಂಡ್ ಕಟ್ಟುವ ಕೆಲಸ ಈ ಕೂಡಲೇ ಆರಂಭಿಸಲಿದ್ದೇನೆ ಮತ್ತು ವರುಣದೇವರು ಖಂಡಿತ ಈ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸುವಲ್ಲಿ ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆ ತನಗಿದೆ ಎಂದು ಹೇಳುತ್ತಾರೆ.

Post navigation

Leave a Reply

Your email address will not be published. Required fields are marked *