12-9-2026
Pranams to all 🙏🏻
One of the carpenters, Unni, recently shared a deeply moving experience at Shaktidham.
A couple of weeks ago, while working on the top layer of the roofing, he was standing on a wooden plank that had been temporarily tied for support. Suddenly, the plank became untied and slipped away while he was standing on it and fell to the ground with loud bang. Everything happened in a fraction of a second. Those around him feared the worst.
Yet, to everyone’s astonishment, Unni was standing safely on the top. A layer above to where he was standing before.
Later, he shared something even more profound. He said that the very moment the plank slipped, before he could even react, he felt a soft palm supporting his feet and gently lifting him onto the plank above. He could feel the softness and firmness of that hand, and without hesitation he said:
“I know it was the Divine Mother who saved me. I could feel Her hand holding me. This place is truly Shakti’s place and we are blessed to work here”
🙏🏻🙏🏻🙏🏻
What we call a miracle may simply be a moment when the veil of separation becomes thin, and we are given a glimpse of what has always been so:
🙏🏻 Amma, may we remain surrendered to that Oneness, knowing that Your hand is ever holding us.
-Kishore C
ಎಲ್ಲರಿಗೂ ಪ್ರಣಾಮಗಳು 🙏🏻
ಶಕ್ತಿಧಾಮದಲ್ಲಿ ಕೆಲಸ ಮಾಡುತ್ತಿರುವ ಬಡಗಿಯವರಲ್ಲಿ ಒಬ್ಬರಾದ ಉಣ್ಣಿಯವರು ಇತ್ತೀಚೆಗೆ ತಮಗಾದ ಹೃದಯಸ್ಪರ್ಶಿ ಅನುಭವವೊಂದನ್ನು ಹಂಚಿಕೊಂಡರು.
ಕೆಲವು ವಾರಗಳ ಹಿಂದೆ, ಯಜ್ಞಶಾಲೆಯ ಮೇಲ್ಛಾವಣಿಯ ಮೇಲಿನ ಹಂತದ ಕೆಲಸದಲ್ಲಿ ತೊಡಗಿದ್ದಾಗ, ತಾತ್ಕಾಲಿಕವಾಗಿ ಆಧಾರಕ್ಕಾಗಿ ಕಟ್ಟಿದ್ದ ಒಂದು ಮರದ ಹಲಗೆಯ ಮೇಲೆ ಅವರು ನಿಂತಿದ್ದರು. ಇದ್ದಕ್ಕಿದ್ದಂತೆ ಆ ಹಲಗೆ ಸಡಿಲವಾಗಿ, ಅವರು ನಿಂತಿದ್ದಾಗಲೇ ಜಾರಿ ಕೆಳಗೆ ಬಿತ್ತು. ಭಾರೀ ಶಬ್ದದೊಂದಿಗೆ ಹಲಗೆ ನೆಲಕ್ಕೆ ಬಿದ್ದಿತು. ಎಲ್ಲವೂ ಕಣ್ಣು ಮಿಟುಕಿಸುವಷ್ಟರಲ್ಲಿ ನಡೆದುಹೋಯಿತು. ಸುತ್ತಮುತ್ತ ಇದ್ದವರಿಗೆ ಏನೋ ಅನಾಹುತ ಸಂಭವಿಸಿರಬಹುದೆಂದು ಭಯವಾಯಿತು.
ಆದರೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸುವಂತೆ, ಉಣ್ಣಿಯವರು ಸುರಕ್ಷಿತವಾಗಿ ಅವರಿಗಿಂತ ಮೇಲಿನ ಹಂತದಲ್ಲಿದ್ದ ಮತ್ತೊಂದು ಹಲಗೆಯ ಮೇಲೆ ನಿಂತಿದ್ದರು!
ನಂತರ ಅವರು ಹಂಚಿಕೊಂಡ ಮಾತು ಇನ್ನೂ ಆಳವಾದದ್ದು.
ಹಲಗೆ ಜಾರಿದ ಆ ಕ್ಷಣದಲ್ಲೇ, ತಾನು ಏನಾಗುತ್ತಿದೆ ಎಂದು ಅರಿಯುವ ಮೊದಲೇ, ತಮ್ಮ ಪಾದಗಳ ಕೆಳಗೆ ಒಂದು ಮೃದುವಾದ ಹಸ್ತದ ಸ್ಪರ್ಶವನ್ನು ಅನುಭವಿಸಿದೆ ಎಂದು ಹೇಳಿದರು. ಆ ದಿವ್ಯ ಹಸ್ತವು ತಮ್ಮ ಪಾದಗಳನ್ನು ಹಿಡಿದು, ಅತ್ಯಂತ ಸೌಮ್ಯವಾಗಿ ಮೇಲಿನ ಹಲಗೆಯ ಮೇಲೆ ಎತ್ತಿ ನಿಲ್ಲಿಸಿದ ಅನುಭವವಾಗಿತ್ತಂತೆ.
ಆ ಹಸ್ತದ ಮೃದುತ್ವವನ್ನೂ, ದೃಢತೆಯನ್ನೂ ಅವರು ಸ್ಪಷ್ಟವಾಗಿ ಅನುಭವಿಸಿದ್ದರು.
ಯಾವುದೇ ಸಂಶಯವಿಲ್ಲದೆ ಅವರು ಹೇಳಿದರು:
“ನನ್ನನ್ನು ಕಾಪಾಡಿದ್ದು ಸಾಕ್ಷಾತ್ ದಿವ್ಯ ಮಾತೆಯೇ ಎಂದು ನನಗೆ ಗೊತ್ತು. ನನ್ನ ಪಾದಗಳನ್ನು ಹಿಡಿದು ಕಾಪಾಡಿದ ಆಕೆಯ ಹಸ್ತವನ್ನು ನಾನು ಅನುಭವಿಸಿದೆ. ಈ ಸ್ಥಳ ನಿಜವಾಗಿಯೂ ಶಕ್ತಿಯ ಸ್ಥಳ. ಇಲ್ಲಿ ಸೇವೆ ಮಾಡುವ ಅವಕಾಶ ನಮಗೆ ದೊರೆತಿರುವುದು ನಮ್ಮ ಭಾಗ್ಯ.”
🙏🏻🙏🏻🙏🏻
ನಾವು ‘ಪವಾಡ’ ಎಂದು ಕರೆಯುವುದೊಂದು, ಬಹುಶಃ ನಮ್ಮ ಮತ್ತು ದೈವದ ನಡುವಿನ ಅಂತರ ಪರದೆ ಕ್ಷಣಕಾಲ ತೆಳುವಾಗಿ, ಸದಾ ನಮ್ಮೊಂದಿಗೇ ಇರುವ ಸತ್ಯದ ಒಂದು ಕಿರುನೋಟ ನಮಗೆ ದೊರಕುವ ಕ್ಷಣವಾಗಿರಬಹುದು.
🙏🏻 ಅಮ್ಮಾ, ಸದಾ ನಮ್ಮನ್ನು ಹಿಡಿದು ನಡೆಸುತ್ತಿರುವ ನಿನ್ನ ಹಸ್ತದ ಮೇಲೆ ಸಂಪೂರ್ಣ ನಂಬಿಕೆಯಿಟ್ಟು, ಆ ಏಕತ್ವದಲ್ಲಿ ಸದಾ ಶರಣಾಗತರಾಗಿ ಉಳಿಯುವ ಕೃಪೆಯನ್ನು ನಮಗೆ ನೀಡು. 🙏🏻