ನೀವು ದೈವೀ ಸಾನಿಧ್ಯದ, ಸಾಮೀಪ್ಯದ ಲಭ್ಯವನ್ನು ಬಯಸಿ ಕಣ್ಣೀರಿಟ್ಟಾಗ, ದೇವರು ಗುರುವಿನ ರೂಪದಲ್ಲಿ ನಿಮ್ಮ ಜೀವನದಲ್ಲಿ ಪ್ರವೇಶಿಸುತ್ತಾರೆ. ಗುರುವು ಸಂಸಾರವೆಂಬ ಮಾಯದ ಬಲೆಯಲ್ಲಿ ಸ್ವತಃ ಪ್ರವೇಶಿಸಿ ನಿಮ್ಮನ್ನು ಆ ಬಲೆಯಿಂದ ಮುಕ್ತರಾಗಿಸುತ್ತಾರೆ .
ಗುರುವು ಮಾಯಾಲೊಕವನ್ನು ಪ್ರವೇಶಿಸಿದಾಗ, ಅವರು ನಿಮ್ಮ ತಿಳುವಳಿಕೆಯ ಸ್ಥಿತಿಗೆ ಇಳಿದು ಬರುತ್ತಾರೆ. ನಿಮ್ಮೊಂದಿಗೆ ಸಾಮಾನ್ಯನಂತೆ ಒಡನಾಡುತ್ತಾ, ನಿಮ್ಮ ನಿಜವಾದ ಸ್ವರೂಪವನ್ನು ನೆನಪಿಸುವ ಮೂಲಕ ನಿಮ್ಮ ದಿವ್ಯತ್ವದ ಅರಿವಿನ ದೃಢ ನಂಬಿಕೆಯನ್ನು ಭಲಪಡಿಸುತ್ತ, ನೀವು ಹಿಡಿದಿರುವ ನನ್ನದೆಂಬ ಸೀಮಿತವನ್ನು ತೊರೆದು, ಗುರುವಿನ ಕಡೆಗೆ( ಅನಂತತೆ) ಕೈ ಚಾಚುವಲ್ಲಿ ಸಕ್ಷಮ್ಯರಾಗಿಸುತ್ತಾರೆ .
ಪೂರ್ಣ ಶರಣಾಗತಿಯಿಂದ ಗುರುವಿನೆಡೆಗೆ ನಿಮ್ಮ ಕೈ ಚಾಚುವುದು ನೀವು ಇಡಬೇಕಾದ ಒಂದು ಹೆಜ್ಜೆ. ನಿಮ್ಮನ್ನು ಮಾಯೆಯ ಬಲೆಯಿಂದ ಹೊರತರುವುದು ಗುರುವಿನ ಜವಾಬ್ದಾರಿ.
ಭಗವಂತನ ಸಾಮೀಪ್ಯ ಲಭ್ಯತೆಯ ಬಯಸುವ ಮೂಲಕ ಶುರುವಾದ ನಿನ್ನ ಮನದ ಹಂಬಲ, ಭಗವಂತನಿಗಾಗಿ ತನ್ನನ್ನು ತಾನು ಹೇಗೆ ಲಭ್ಯವಾಗಿರುವಂತೆ ತೊಡಗಿಸಿಕೊಳ್ಳುವುದು ಎನ್ನುವ ಹಂಬಲ ನಿನ್ನಲ್ಲಿ ಮೂಡುವುದು ನಿನ್ನೊಳಗೆ ಮೂಡುವ ನಿಜವಾದ ಪರಿವರ್ತನೆ.
ನಾನು ಈಗಾಗಲೇ ನಿನ್ನೆಡೆಗೆ 99 ಹೆಜ್ಜೆಗಳನ್ನು ಇಟ್ಟು ನಿನಗಾಗಿ ಬಂದಿದ್ದೇನೆ. ಈಗ ಆ ಒಂದು ಹೆಜ್ಜೆ ಇಡುವ ಸರದಿ ನಿನ್ನದು. ನಾನು ಕಾಯುತ್ತಿದ್ದೇನೆ.
When you pray for the divine proximity, when you shed tears of pining for god praying that god should be available to you, that is when God steps into your life in the form of a Guru. The Guru enters the web of Maya to get you out of it. When guru enters the web of maya he will come down to your state of understanding and stretches the hand towards you by being with you, walking, talking, eating with you and always reminding you your true nature so that you will be courageous to let go what is in your hand and stretch your hand with faith in Guru to hold you. Stretching your hand in surrender is that one step you have to take and rest is the responsibility of your Guru to get you out of the web.
From asking god to be available to you to asking yourself how to be available to god is the true transformation within.
I have already taken those 99 steps towards you and now it is your turn to take that one step. I’m waiting Blessings